ಕವನಮುನಿ : ಶಾಕ್ಯಮುನಿಬುದ್ಧನೂ ಸೇರಿ ಏರ್ಪಡುವ ಇಪ್ಪತ್ತನಾಲ್ಕು ಮಂದಿ ಬುದ್ಧರಲ್ಲಿ ಇಪ್ಪತ್ತಮೂರನೆಯವ. ಪಾಳಿಯಲ್ಲಿ ಇವನಿಗೆ ಕೋಣಾಗಮನೆಂಬ ಹೆಸರಿದೆ. ಅಶೋಕ ಕನಕಮುನಿಯ ಸ್ತೂಪವನ್ನು ಸಂದರ್ಶಿಸಿ ಶಿಧಸಿ ಶಿಥಿಲವಾಗಿದ್ದ ಆ ಸ್ತೂಪವನ್ನು ಮಾಡಿಸಿದನೆಂದು ಶಿಲಾಶಾಸನವೊಂದು ಹೇಳುತ್ತದೆ. ಎಂದಮೇಲೆ ಕನಕಮುನಿ ಐತಿಹಾಸಿಕ ವ್ಯಕ್ತಯಾಗಿದ್ದನೆಂದು ತಿಳಿಯಬಹುದು. ಬುದ್ಧವಂಶದಲ್ಲಿ ಉಲ್ಲೇಖಿತವಾಗಿರುವ ಇಪ್ಪತ್ತನಾಲ್ಕು ಬುದ್ಧರಲ್ಲಿ ಬಹುಶಃ ಬಹುಮಂದಿ ಚಾರಿತ್ರಿಕ ವ್ಯಕ್ತಿಗಳಿಲ್ಲ.	(ಎಸ್.ಕೆ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ